ಬೆಳೆಗಳು ಸಮೃದ್ಧಿಯಾಗಿ ಬೆಳೆಯುವುದಕ್ಕಾಗಿ ಅನುಸರಿಸುವ ಎಲ್ಲಾ ಬೇಸಾಯ ಕ್ರಮಗಳ ಈ ಪದ್ಧತಿಯಲ್ಲಿ ಬರುತ್ತವೆ. ಇದರಿಂದಾಗಿ ಬೆಳೆಗಳಿಗೆ ಕಳೆಗಳ ಪೈಪೋಟಿಯನ್ನು ಕಡಿಮೆ ಮಾಡಿಕೊಳ್ಳುವ ಸ್ವಶಕ್ತಿ ಬರುತ್ತದೆ. ಭೂಮಿಯನ್ನು ಉಳಿಮೆ ಮಾಡಿ ಮಣ್ಣನ್ನು ಸಿದ್ಧಪಡಿಸುವುದು ಸೂಕ್ತ ಕಾಲದಲ್ಲಿ ಬಿತ್ತುವುದು ಬೆಳೆಗಳ ಪರಿವರ್ತನೆ ಅನುಸರಿಸುವುದು ಸೂಕ್ತ ಪ್ರಮಾಣದ ಬಿತ್ತನೆ, ಪ್ರಮಾಣ ಮತ್ತು ಅಂತರ ಅನುಸರಿಸುವುದು. ಪೋಷಕಾಂಶಗಳನ್ನು ಸೂಕ್ತ ಪ್ರಮಾಣ, ಕಾಲ ಮತ್ತು ಪದ್ಧತಿಗಳಿಂದ ಕೊಡುವುದು ಅಂತರ ಬೆಳೆಗಳನ್ನು ಬೆಳೆಯುವುದು ಬಹು ವಾರ್ಷಿಕ ಕಳೆಗಳನ್ನು ಹತ್ತಿಕ್ಕಲು ಎತ್ತರವಾದ ಬೆಳೆಗಳಾದ ಜೋಳ, ಮುಸುಕಿನ ಜೋಳ ಮುಂತಾದವುಗಳನ್ನು ಬೆಳೆಯಬೇಕು ಇತ್ಯಾದಿ ಎಲ್ಲಾ ಬೇಸಾಯ ಕ್ರಮಗಳು. ಮೂಲ : ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು