ಸಮಗ್ರ ತೇವಾಂಶ ನಿರ್ವಹಣೆ: ಸಮಗ್ರ ಪೌಷ್ಟಿಕಾಂಶ ನಿರ್ವಹಣೆ: ಸಾವಯವ ಕೃಷಿ: ಬೆಳೆ ಬದಲಾಚಣೆ:/li> ಅಂತರ ಬೆಳೆ/ಮಿಶ್ರ ಬೆಳೆ: ಬೆಳೆ ಪರಿವರ್ತನೆ/ಎರಡು ಬೆಳೆ: ಬಹು ಬೆಳೆ ಪದ್ಧತಿ (ಕೃಷಿ+ತೋಟಗಾರಿಕೆ+ಅರಣ್ಯ+ಮೇವು+ಹಸಿರೆಲೆ ಗೊಬ್ಬರ ಬೆಳೆಗಳು ಇತ್ಯಾದಿ): ರೈತರ ಕ್ಷೇತ್ರ ಪಾಠ ಶಾಲೆ: ಮಗ್ರ ಕೀಟ/ ರೋಗ ನಿರ್ವಹಣೆ: ಸಮಗ್ರ ಕಳೆ ನಿರ್ವಹಣೆ: ಅಂರ್ತಜಲ ವೃದ್ಧಿಯಿಂದ ಅಥವಾ ಮಳೆನೀರು ಕೊಯ್ಲಿನಿಂದ ಹೆಚ್ಚುವರಿ ಸಿಗುವ ನೀರಿನಿಂದ ಕಿರು ನೀರಾವರಿ ಪದ್ಧತಿ ಅಳವಡಿಕೆ ಈ ಮೇಲಿನ ಎಲ್ಲಾ ಕೃಷಿ ಉತ್ಪಾದನಾ ಪದ್ಧತಿಗಳು ಪರಸ್ಪರ ಪೂರಕವಾಗಿದ್ದು ಒಂದನ್ನೊಂದು ಅವಲಂಭಿಸಿರುತ್ತವೆ. ಮಣ್ಣು ಮತ್ತು ನೀರು ಸಂರಕ್ಷಣೆ ಚಟುವಟಿಕೆಗಳಷ್ಟೆ ಪ್ರಾಮುಖ್ಯತೆಯನ್ನು ಬೆಳೆ ಉತ್ಪಾದನೆ ಪದ್ಧತಿಗಳಿಗೆ ನೀಡಬೇಕು. ಇದರಿಂದ ಒಟ್ಟಾರೆ ಜಲಾನಯನ ಪ್ರದೇಶ ಅಭಿವೃದ್ಧಿಗೆ ಹಾಗೂ ಜನರ ಆದಾಯ ವೃದ್ಧಿಗೆ ಸಹಾಯಕವಾಗುತ್ತದೆ. ಮಳೆ ಮುನ್ಸೂಚನೆ ಮಾಹಿತಿ : ಆಯಾ ಪ್ರದೇಶದ ಮಳೆ ಮಾಪನ ಕೇಂದ್ರಗಳಲ್ಲಿ ಆಗುವ ಮಳೆಯನ್ನು ಆಧರಿಸಿ ಬೇಸಾಯ ಕ್ರಮಗಳನ್ನು ಮುಂಚಿತವಾಗಿಯೇ ರೈತರಿಗೆ ತಿಳಿಸಬಹುದು. ಆಯಾ ಪ್ರದೇಶದ ಮಳೆ ಪ್ರಮಾಣ ಸಂಭವನೀಯತೆ, ಹಂಚಿಕೆ ಮತ್ತು ತೀವ್ರತೆಗಳನ್ನೊಳಗೊಂಡಂತೆ ಮಾಹಿತಿಯನ್ನು ನಕ್ಷೆಗಳ ಮೂಲಕ ಪ್ರದರ್ಶನ. ವರ್ಷದಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಮಳೆ ಪ್ರಮಾಣವನ್ನು ಗ್ರಾಫ್ನಲ್ಲಿ ನಮೂದಿಸಿ ಆಯಾ ತಿಂಗಳುಗಳಲ್ಲಿ ಬರುವ ಮಳೆ ಪ್ರಮಾಣ ಊಹಿಸಿ ಮುಂಜಾಗ್ರತೆಯಾಗಿ ಕೃಷಿ ಪರಿಕರಗಳನ್ನು ಜೋಡಿಸಿಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಡುವುದು. ಬಿತ್ತನೆಯನ್ನು ಕನಿಷ್ಠ ಮಳೆ ಆಧರಿಸಿ ಮುಂದೆ ಬೆಳವಣಿಗೆ ಹಂತದಲ್ಲಿ ಸಿಗುವ ತೇವಾಂಶವನ್ನು ಪರಿಗಣಿಸಿ ರಸಗೊಬ್ಬರ ನೀಡುವ, ಅಂತರ ಬೇಸಾಯ ಮಾಡುವ, ಕಟಾವು ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಮಳೆ ಮುನ್ಸೂಚನೆಯ ಮಾಹಿತಿ ಮತ್ತು ಗ್ರಾಫ್ಗಳು ಉಪಯುಕ್ತವಾಗುತ್ತದೆ. ಸಾವಯುವ ಕೃಷಿ ಪದ್ಧತಿ : ಸಾವಯವ ಕೃಷಿ ಎಂದರೆ ಪ್ರಕೃತಿದತ್ತವಾದ ಕೃಷಿ ಸಂಪನ್ಮೂಲಗಳಲ್ಲಿ ಒಂದಾದ ಮಣ್ಣನ್ನು ಜೀವಂತವಾಗಿಟ್ಟುಕೊಂಡು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಬೆಳೆ ತೆಗೆಯುವ ವಿಧಾನ. ಕನಿಷ್ಠ ಉಳುಮೆ ಎರೆಗೊಬ್ಬರ ಬಳಕೆ ಸಾವಯವ ಗೊಬ್ಬರ / ಕೊಟ್ಟಿಗೆ ಗೊಬ್ಬರದ ಬಳಕೆ ಹಸಿರೆಲೆ ಗೊಬ್ಬರ ಬಳಕೆ ಜೈವಿಕ ಗೊಬ್ಬರಗಳ ಬಳಕೆ ಹಿಂಡಿ ಗೊಬ್ಬರಗಳ ಬಳಕೆ ಬೀಜಾಮೃತ, ಜೀವಾಮೃತಗಳ ಮತ್ತು ಪಂಚಗವ್ಯಗಳ ಬಳಕೆ ಹೊದಿಕೆ (ಮಲ್ಚಿಂಗ್) ರೈತ ಕ್ಷೇತ್ರ ಪಾಠಶಾಲೆ : ರೈತರ ಕ್ಷೇತ್ರ ಪಾಠಶಾಲೆ ಒಂದು ವಿಶಿಷ್ಟವಾದ ಗುಂಪು ಕಲಿಕಾ ವಿಧಾನ. ರೈತರು ತಾಂತ್ರಿಕತೆಯ ಬಗ್ಗೆ ಕೇಳಿ, ಕಂಡು, ಅನ್ವೇಷಣೆ ಮಾಡಿ, ಆಚರಿಸಿ, ಪೂರ್ಣಜ್ಞಾನ ಪಡೆದು ಆತ್ಮವಿಶ್ವಾಸ ಗಳಿಸುತ್ತಾರೆ. ರೈತರ ಜಮೀನುಗಳೇ ಕಲಿಕ ಸ್ಥಳವಾಗಿರುತ್ತವೆ. ಧೀರ್ಘಕಾಲ ಗುಂಪಿನಲ್ಲಿ ಕಲಿಯುವ ವಿಧಾನ. ಮಾಡಿ ಕಲಿ ನೋಡಿ ತಿಳಿ ಎಂಬ ವಿಶೇಷ ಶಿಕ್ಷಣ ಪದ್ಧತಿಯಾಗಿದೆ. ರೈತರಿಗೆ ಕಲಿತ ವಿಷಯಗಳು ಪೂರ್ಣವಾಗಿ ಮನದಟ್ಟಾಗುತ್ತದೆ.’ ನೆಲಗಡಲೆ ಹೊಲದಲ್ಲಿ ರೈತರು ಪರಸ್ಪರ ನೋಡಿ ಕಲಿಯುತ್ತಿರುವುದು ಮೂಲ :ದೂರ ಶಿಕ್ಷಣ ಘಟಕ,ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ,ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು.