ರಾಸಾಯನಿಕ ಪದ್ಧತಿಗಳು ಕಳೆನಾಶಕ (ರಾಸಾಯನಿಕ ವಸ್ತು) ಗಳನ್ನು ಬೆಳೆಗಳಲ್ಲಿ ಉಪಯೋಗಿಸಿದಾಗ ಬೆಳೆಗಳಿಗೆ ಹಾನಿಮಾಡದೆ ಕಳೆಗಳನ್ನು ಮಾತ್ರ ಕೊಲ್ಲಬೇಕು. ಈ ರೀತಿ ಕಳೆನಾಶಕಗಳು ಕೆಲಸ ಮಾಡಬೇಕಾದರೆ ಆಯ್ಕೆ ನಿಯಮವನ್ನು ಮತ್ತು ಇನಿತರೆ ಮಾರ್ಪಾಟುಗಳನ್ನು ಮಾಡುವುದರಿಂದ ಸಾಧ್ಯವಾಗುತ್ತದೆ. ಅಂದರೆ ಒಂದು ಕಳೆನಾಶಕವನ್ನು ಎಲ್ಲಾ ಬೆಳೆಗಳಲ್ಲಿಯೂ ಉಪಯೋಗಿಸುವುದಕ್ಕೆ ಬರುವುದಿಲ್ಲ. ಕಳೆನಾಶಕ ವಿಧಗಳು ಉದಯ ಪೂರ್ವ ಕಳೆನಾಶಕಗಳು : ಕಳೆನಾಶಕಗಳು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 3-5 ದಿವಸಗಳೊಳಗೆ ನೆಲದ ಮೇಲೆ ಎಲ್ಲಾ ಭಾಗಕ್ಕೂ ಬೀಳುವಾಗೆ ಸಿಂಪರಣೆ ಮಾಡುವುದು. ಉದಯೋತ್ತರ ಕಳೆನಾಶಕಗಳು ಕಳೆನಾಶಕಗಳು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 15-20 ದಿವಸಗಳಲ್ಲಿ ಕಳೆಗಳು 2-4 ಎಲೆ ಬಿಟ್ಟಿರುವ ಸಮಯದಲ್ಲಿ ಬೆಳೆಗಳು ಸೇರಿ ನೆಲದ ಮೇಲೂ ಎಲ್ಲಾ ಭಾಗಕ್ಕೂ ಬೀಳುವಾಗೆ ಸಿಂಪರಣೆ ಮಾಡುವುದು. ರಾಸಾಯನಿಕ ಕಳೆನಾಶಕಗಳ ಬಳಕೆ ಈ ಕೆಳಕಂಡ ವಿಶೇಷ ಪರಿಸ್ಥತಿಗಳಲ್ಲಿ ಮಾತ್ರ ಅನ್ಯ ಮಾರ್ಗವಿಲ್ಲದೆ ರಾಸಾಯನಿಕ ಕಳೆನಾಶಕಗಳನ್ನು ಅತೀ ಎಚ್ಚರಿಕೆಯಿಂದ ಬಳಸಬೇಕು. ಕೈಯಲ್ಲಿ ಕಳೆ ಕೀಳುವುದಕ್ಕೆ ಆಗದಿರುವುದು ಎಲ್ಲಿ ಕಳೆ ಮತ್ತು ಸಸಿಗಳು ಒಂದೇ ರೀತಿ ಕಾಣುತ್ತವೆ (ಭತ್ತ/ಗೋಧಿ) ಎಲ್ಲಿ ಕೃಷಿ ಕಾರ್ಮಿಕರಿಗೆ ಕೊಡುವ ಕೂಲಿ ಖರ್ಚು ಹೆಚ್ಚಾಗಿ, ರಾಸಾಯನಿಕ ಕಳೆನಾಶಕ ಬಳಕೆಗಿಂತ ಹೆಚ್ಚಿರುತ್ತದೆಯೋ ಅಂತಹ ಪ್ರದೇಶದಲ್ಲಿ. ಎಲ್ಲಿ ಕೃಷಿಕಾರ್ಮಿಕರು ಸಿಕ್ಕುವುದಿಲ್ಲವೋ, ಆ ಪ್ರದೇಶದಲ್ಲಿ ಮೂಲ :ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು