ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಕಛೇರಿಯು ಬೆಂಗಳೂರು-560 003, ಮಲ್ಲೇಶ್ವರಂ, 18ನೇ ಅಡ್ಡರಸ್ತೆ, ಅರಣ್ಯ ಭವನ ಇಲ್ಲಿ ಇರುತ್ತದೆ. ಅರಣ್ಯದ ವಿಷಯಗಳಲ್ಲಿ ಸರ್ಕಾರಕ್ಕೆ ತಾಂತ್ರಿಕ ಮತ್ತು ವೃತ್ತಿಪರ ಸಲಹೆಗಾರರಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಪಡೆ ಮುಖ್ಯಸ್ಥರು) ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಇವರು ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್ ಆಗಿರುತ್ತಾರೆ. ಇವರು ರಾಜ್ಯದ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಅಭಯಾರಣ್ಯಗಳು ಮತ್ತು ವನ್ಯಜೀವಿಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ. ಇಲಾಖೆಯ ಪ್ರಾಂತೀಯ ಆಡಳಿತಾತ್ಮಕ ಉದ್ದೇಶಕ್ಕಾಗಿ ರಾಜ್ಯವನ್ನು ಕಾರ್ಯಸಂಬಂಧಿ ವೃತ್ತಗಳು ಅಂದರೆ ಅರಣ್ಯ ಸಂಶೋಧನೆ ಮತ್ತು ಉಪಯೋಗ, ಕ್ಷೇತ್ರೀಯ ನಿರ್ದೇಶಕರು (ಹುಲಿ ಯೋಜನೆ), ಕಾರ್ಯ ಯೋಜನೆ, ತರಬೇತಿ ಮತ್ತು ಅರಣ್ಯ ಸಂಚಾರಿ ದಳಗಳಷ್ಟೇ ಅಲ್ಲದೆ ಹದಿಮೂರು ಪ್ರಾಂತೀಯ ವೃತ್ತಗಳನ್ನಾಗಿ ವಿಂಗಡಿಸಲಾಗಿದೆ. ಹುತಾತ್ಮರು ಕಳ್ಳಸಾಗಾಣಿಕೆದಾರರು, ಕಳ್ಳಬೇಟೆಗಾರರಿಂದ ಅರಣ್ಯವನ್ನು ರಕ್ಷಿಸುವಾಗ ಮತ್ತು ಕೆಲವು ಬಾರಿ ವನ್ಯಪ್ರಾಣಿಗಳ ದಾಳಿಯಿಂದಾಗಿ ಹಲವಾರು ಅರಣ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಗಳು ಸೇವೆಯಲ್ಲಿರುವಾಗ ತಮ್ಮ ಪ್ರಾಣ ಕಳೆದುಕೊಂಡಿತ್ತಾರೆ. ರಾಷ್ಟ್ರದ ಅರಣ್ಯಗಳನ್ನು ರಕ್ಷಿಸುವಾಗ ತಮ್ಮ ಪ್ರಾಣ ಕಳೆದುಕೊಂಡ ಅಂತಹ ಅಧಿಕಾರಿಗಳು/ಸಿಬ್ಬಂದಿಗಳ ಹೆಸರುಗಳನ್ನು ಅಂತಹ ಅಧಿಕಾರಿಗಳ/ಸಿಬ್ಬಂದಿಗಳ ಸ್ಮರಣೆ ಹಾಗೂ ಗೌರವಾರ್ಥವಾಗಿ ಹುತಾತ್ಮರ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರತಿ ವರ್ಷದ ನವೆಂಬರ್ 11ನೇ ದಿನಾಂಕದಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಹುತಾತ್ಮರ ಪಟ್ಟಿ ಕ್ರ. ಸಂ. ಹುತಾತ್ಮರ ಹೆಸರು ಹುದ್ದೆ ವಿಭಾಗದ ಹೆಸರು ನಿಧನದ ದಿನಾಂಕ 1 ಶಂಕರ್ ಮುದಲಗಿ ಅರಣ್ಯ ರಕ್ಷಕ ಬೆಳಗಾವಿ 13-08-1966 2 ಮಾದನಾಯಕ್ ಅರಣ್ಯ ರಕ್ಷಕ ಚಾಮರಾಜನಗರ 29-12-1966 3 ಜೋಗೇಗೌಡ ಉಪ ವಲಯ ಅರಣ್ಯಾಧಿಕಾರಿ ಚಾಮರಾಜನಗರ 29-12-1966 4 ಅಬ್ದುಲ್ ಅಹ್ಮದ್ ಉಪ ವಲಯ ಅರಣ್ಯಾಧಿಕಾರಿ ಕೊಳ್ಳೇಗಾಲ 18-01-1971 5 ಅಹ್ಮದ್ ಖಾನ್ ಉಪ ವಲಯ ಅರಣ್ಯಾಧಿಕಾರಿ ಕೊಳ್ಳೇಗಾಲ 30-01-1971 6 ಹುಚ್ಚಾ ಶೆಟ್ಟಿ ಅರಣ್ಯ ರಕ್ಷಕ ಚಾಮರಾಜನಗರ 09-11-1976 7 ರಂಗಾರಾಜ್ ಅರಸ್ ಕೆ ಎನ್ ವಲಯ ಅರಣ್ಯ ಅಧಿಕಾರಿ ಹಾಸನ 05-07-1978 8 ಹಂಪಯ್ಯ ಜಿ ಐ ಅರಣ್ಯ ರಕ್ಷಕ ಬೆಳಗಾವಿ 30-08-1982 9 ಬಸರಿ ಕಟ್ಟಿ ಎನ್ ಇ ಅರಣ್ಯ ರಕ್ಷಕ ಬೆಳಗಾವಿ 25-03-1983 10 ಪೃತು ಕುಮಾರ್ ಕೆ ಎಂ ಅರಣ್ಯ ವೀಕ್ಷಕ ಅರಣ್ಯ ಸಂಶೋಧನಾ, ಮಡಿಕೇರಿ 27-08-1983 11 ಹನುಮಂತಪ್ಪ ಹೆಚ್ ಎನ್ ವಲಯ ಅರಣ್ಯ ಅಧಿಕಾರಿ ಚಿಕ್ಕಮಗಳೂರು 26-01-1985 12 ಖಾನಾಪುರಿ ಬಿ ಡಿ ಉಪ ವಲಯ ಅರಣ್ಯಾಧಿಕಾರಿ ಬೆಳಗಾವಿ 08-11-1986 13 ಅರವಿಂದ ಡಿ ಹೆಗಡೆ ವಲಯ ಅರಣ್ಯ ಅಧಿಕಾರಿ ಶಿರಸಿ 19-04-1988 14 ಮೋಹನಯ್ಯ ಬಿ ಸಿ ಅರಣ್ಯ ರಕ್ಷಕ ಕೊಳ್ಳೇಗಾಲ 04-08-1989 15 ಬಸವನ್ನೆ ಎಚ್ ಅರಣ್ಯ ರಕ್ಷಕ ಸಾಗರ 06-11-1989 16 ಶ್ರೀನಿವಾಸ ಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಾಮರಾಜನಗರ 10-11-1991 17 ನಾಗರಾಜು ಬಿ ಡಿ ಗ್ರೂಪ್ ಭದ್ರ (ವ ಜೀ) 23-06-1994 18 ಪೂಜಾರಿ ಎಂ ಆರ್ ಅರಣ್ಯ ರಕ್ಷಕ ಧಾರವಾಡ 14-06-1995 19 ಅಣ್ಣಯ್ಯ ಜಿ ಕೆ ಆನೆ ಮಾವುದ ಚಾಮರಾಜನಗರ 17-10-1996 20 ವಿಠಲ್ ಕೆ ಎಸ್ ಅರಣ್ಯ ರಕ್ಷಕ ವಿರಾಜಪೇಟೆ 13-05-1997 21 ಲೋಕೇಶ್ ಎಲ್ ಅರಣ್ಯ ರಕ್ಷಕ ಸಾಗರ 12-10-1997 22 ಗಣೇಶ್ ಎಸ್ ಟಿ ದಿನಗೂಲಿ ನೌಕರ ಸಾಗರ 12-10-1997 23 ಹನುಮಂತಪ್ಪ ವೈ ಉಪ ವಲಯ ಅರಣ್ಯಾಧಿಕಾರಿ ಸಾಗರ 28-11-1997 24 ಪೊನ್ನಪ್ಪ ಪಿ ಎ ಅರಣ್ಯ ರಕ್ಷಕ ಹುಣಸೂರು (ವ ಜೀ) 23-12-1997 25 ರಾಮ ಜಿ ಕೆ ಅರಣ್ಯ ವೀಕ್ಷಕ ಹುಣಸೂರು (ವ ಜೀ) 30-07-1998 26 ರಂಗನ ಗೌಡರ್ ಎಂ ವಿ ವಲಯ ಅರಣ್ಯ ಅಧಿಕಾರಿ ಬೆಳಗಾವಿ 20-03-1999 27 ಶ್ರೀನಿವಾಸಯ್ಯ ಅರಣ್ಯ ವೀಕ್ಷಕ ತುಮಕೂರು 24-07-1999 28 ವೀರ ಭದ್ರಪ್ಪ ಅರಣ್ಯ ವೀಕ್ಷಕ ಶಿವಮೊಗ್ಗ (ವ ಜೀ) 26-10-1999 29 ಅಣ್ಣಪ್ಪ ಮಲ್ಲಪ್ಪ ಮುಲಗೋಡ್ ಅರಣ್ಯ ರಕ್ಷಕ ಹಳಿಯಾಳ 26-07-2002 30 ಕಾಳೇಗೌಡ ಅರಣ್ಯ ರಕ್ಷಕ ಚಿಕ್ಕಮಗಳೂರು 21-08-2002 31 ಶಿರ ಹಟ್ಟಿ ಎಂ ಡಿ ಅರಣ್ಯ ರಕ್ಷಕ ಗದಗ್ 23-01-2005 32 ರಾಜಾ ಶೇಖರಪ್ಪ ಅರಣ್ಯ ರಕ್ಷಕ ತುಮಕೂರು 14-03-2006 33 ನಾರಾಯಣ್ ಎಚ್ ಸಿ ಅರಣ್ಯ ವೀಕ್ಷಕ ಶಿವಮೊಗ್ಗ 07-04-2007 34 ಮಂಜುನಾಥಪ್ಪ ಅರಣ್ಯ ರಕ್ಷಕ ಭದ್ರಾವತಿ 07-06-2010 35 ಪ್ರಭಾಕರ ಬಿ ಉಪ ವಲಯ ಅರಣ್ಯಾಧಿಕಾರಿ ಮಂಗಳೂರು 09-02-2011 36 ಎಂ ಎಚ್ ನಾಯಕ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಾಂಡೇಲಿ ಉಪ ವಿಭಾಗ 08-05-2012 37 ದಬ್ಬನ್ನ ದಿನಗೂಲಿ ನೌಕರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ 09-08-2012 ಮೂಲ : ಅರಣ್ಯ ಇಲಾಖೆ