ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ದೇಶದ ಒಟ್ಟು ಸಾಗುವಳಿ ಕ್ಷೇತ್ರವಾದ 143.9 ದಶಲಕ್ಷ ಹೆಕ್ಟೇರ್ ಪ್ರದೇಶವು ಒಣ ಭೂಮಿಯೆಂದು ವರ್ಗೀಕರಿಸಲಾಗಿದ್ದು, ಕೈಗೊಳ್ಳುವ ಪ್ರತಿಯೊಂದು ಕೃಷಿ ಚಟುವಟಿಕೆಗಳು ಮಳೆಯನ್ನೇ ಅವಲಂಬಿಸಿವೆ. ಇಂತಹ ಪ್ರದೇಶಗಳಲ್ಲಿ ಬೀಳುವ ಮಳೆಯೂ ಕೇವಲ 2-3 ತಿಂಗಳುಗಳಲ್ಲಿ ಅತ್ಯಂತ ವೇಗವಾಗಿ ಸುರಿದು ಕೆರೆ ಹಳ್ಳಗಳನ್ನು ಸೇರಿ ಹರಿದು ಹೋಗುತ್ತದೆ. ಗ್ರಾಮಾಂತರ ಪ್ರದೇಶಗಳೂ ಅಥವಾ ಪಟ್ಟಣಗಳಲ್ಲಿ ಮತ್ತು ಅವುಗಳ ಸಮೀಪ ಇರುವ ಜಲಾನಯನ ಪ್ರದೇಶಗಳಲ್ಲಿ ನೀರನ್ನು ಶೇಖರಿಸಬಹುದಾಗಿದ್ದು, ಈ ತರಹ ಶೇಖರಿಸಿದ ನೀರು ಸ್ಥಳೀಯ ಅಗತ್ಯತೆಗಳನ್ನು ಪೂರೈಸಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣಕ್ಕೆ ನಾವು ಆದ್ಯತೆ ಕೊಡಬೇಕಾಗಿದೆ. ಮಳೆ ನೀರಿನ ಕೊಯ್ಲು ಎಂದರೆ ಮಳೆ ಬಂದಾಗ ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವುದು. ಮಳೆ ನೀರು ಕೊಯ್ಲಿನ ಲಾಭಗಳು • ಪರಿಸರಸ್ನೇಹಿ ಸರಳ ತಂತ್ರಜ್ಞಾನವಾಘಿದ್ದು, ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದು• ಬರಗಾಲದಲ್ಲಿ ನೆರವಾಗುವುದು ಹಾಗು ಅಂತರ್ಜಲವನ್ನು ಹೆಚ್ಚಿಸಿ ಮಣ್ಣಿನ ಕೊಚ್ಚಣೆ ತಡೆಯುವುದು• ತಗ್ಗಿನ ಪ್ರದೇಶಗಳಿಗೆ ಬರುವ ನೆರೆ ಪ್ರವಾಹವನ್ನು ತಡೆಗಟ್ಟುವುದು• ನೀರಿನ ಉಳಿತಾಯವಾಗುವುದು• ನಿಖರವಾದ ಸ್ಥಳಗಳಲ್ಲಿ / ಸಮಯದಲ್ಲಿ ನೀರಿನ ಪೂರೈಕೆಯಾಗುವುದು• ಜಲಭರಗಳಲ್ಲಿ ಗುಣಮಟ್ಟದ ನೀರಿನ ಸಂಗ್ರಹಣೆಯಾಗುವುದು• ಸಮುದ್ರದ ನೀರು ಅಂತರ್ಜಲದಲ್ಲಿ ಸೇರುವುದನ್ನು ತಡೆಗಟ್ಟುವುದು• ನೀರನ್ನು ಮೇಲೆತ್ತುವಲ್ಲಿ ವಿದ್ಯುತ್ತಿನ ಕಡಿಮೆ ಬಳಕೆಯಾಗುವುದು Source : ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು ಮೂಲ : ಉಅಸ್ರ್ ಆಗ್ರೋ ಪೀಡಿಯಾ